ಮೊಬೈಲ್ ಜಾಸ್ತಿ ಬಳಸುವ ಮಕ್ಕಳಲ್ಲಿ ಕಂಡುಬರುವ ಸಮಸ್ಯೆ ಇದು! ಎಚ್ಚರವಿರಲಿ!

ನಿಮ್ಮ ಮನೆಯಲ್ಲಿ ಮಕ್ಕಳಿದ್ದರೆ ಅಥವಾ ಅಕ್ಕ ಪಕ್ಕದ ಮನೆಯಲ್ಲಿ ಮಕ್ಕಳಿದ್ದರೆ ಪೋಷಕರು ಹೇಳೋ ಒಂದೇ ಒಂದು ದೂರು ಅಂದರೆ ಮಕ್ಕಳು ಓದುವುದಿಲ್ಲ, ಬರೆಯೋದಿಲ್ಲಾ, ತಿಂಡಿ, ಕಾಫಿಯಿಂದ ಹಿಡಿದು ಮಲಗುವವರೆಗೂ ಮೊಬೈಲ್ ಆನ್ ಮಾಡಿ ಕೈಗೆ ನೀಡಿರಬೇಕು. ಇಲ್ಲದಿದ್ದರೆ ಅವರನ್ನ ಹಿಡಿಯೋದೇ ಕಷ್ಟವಾಗಿರುತ್ತೆ. ಎಲ್ಲಾ ಸಮಯದಲ್ಲೂ ಮೊಬೈಲ್‌ನಲ್ಲಿ ಕಾಲ ಕಳೆಯುತ್ತಾರೆ. ಇದು ಸಾಮಾನ್ಯವಾಗಿ ಎಲ್ಲರ ಮನೆಯ ದೂರು.

ಒಂದು ಕ್ಷಣ ಮೊಬೈಲ್ ಸ್ವೀಚ್‌ ಆಫ್‌ ಆದರೂ ಇಲ್ಲವೆ  ಕರೆ ಬಂದರೂ ಅವರು ಸಹಿಸುವುದಿಲ್ಲ. ಹೀಗೆ ಮೊಬೈಲ್‌ಗೆ ಅಂಟಿಕೊಂಡಿರುವುದು ಪೋಷಕರಲ್ಲಿ ತಲೆ ನೋವು ತರಿಸುತ್ತೆ.

ಆದ್ರೆ ಹೆಚ್ಚು ಸಮಯ ಮೊಬೈಲ್ ಬಳಕೆ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ ಎಂಬುದು ನಮಗೆ ತಿಳಿದೇ ಇದೆ. ದೃಷ್ಟಿ ದೋಷ, ಶ್ರವಣ ದೋಷ ಸೇರಿ ಹತ್ತು ಹಲವು ಸಮಸ್ಯೆಗೆ ನಾವು ಒಳಗಾಗುತ್ತೇವೆ. ಆದ್ರೆ ಮಕ್ಕಳಲ್ಲಿ ಮೊಬೈಲ್ ಬಳಕೆ ಹೆಚ್ಚಾದರೆ ಮಕ್ಕಳಿಗೆ ಯಾವ ಸಮಸ್ಯೆ ಉಂಟಾಗುತ್ತಿದೆ. ಅವರು ಹೆಚ್ಚು ಸಮಯ ಮೊಬೈಲ್ ಬಳಕೆ ಮಾಡಿದರೆ ಯಾವ ಸಮಸ್ಯೆ ಉಂಟಾಗುತ್ತದೆ ಎಂಬುದನ್ನು ನಾವು ತಿಳಿದುಕೊಳ್ಳೋಣ.

ಮಕ್ಕಳ ಮಾನಸಿಕತೆ ಮೇಲೆ ಹಾನಿ:
ಮೊಟ್ಟ ಮೊದಲನೆಯದಾಗಿ ಮಕ್ಕಳು ಹೆಚ್ಚು ಸಮಯ ಮೊಬೈಲ್ ಬಳಸುವುದರಿಂದಾಗಿ ಅವರು ಗೇಮ್ ಆಡುವುದು, ವಿಡಿಯೋ ನೋಡುವುದರಿಂದ ಹೈ ಕಲರ್ ಡಿಸ್‌ಪ್ಲೇ, ಫಾಸ್ಟ್ ಮೂವಿಂಗ್ ವಸ್ತುಗಳ ನೋಡಿ ಹೊರಗಿನ ಪ್ರಪಂಚ ಅವರಿಗೆ ಸ್ಲೋ ಎನಿಸಲು ಆರಂಭಿಸುತ್ತೆ. ಇದರಿಂದ ಮೊಬೈಲ್ ಬಿಟ್ಟು ಬೇರೆ ಕೆಲಸ ಮಾಡಲು ಮನಸಾಗುವುದಿಲ್ಲ. ಜೊತೆಗೆ ಮೊಬೈಲ್‌ ರೀತಿ ಪುಸ್ತಕ ಅವರಿಗೆ ಕಲರ್‌ಫುಲ್ ಆಗಿ, ಇಂಟರೆಸ್ಟಿಂಗ್ ವಸ್ತು ಎನಿಸುವುದಿಲ್ಲ. ಇದು ಅವರ ಮಾನಸಿಕ ಸ್ಥಿತಿಯ ಮೇಲೆ ಗಂಭೀರ ಪರಿಣಾಮ ಉಂಟುಮಾಡುತ್ತದೆ.

ಮಾತು ತಡವಾಗುತ್ತೆ:
ಮೊಬೈಲ್ ಬಳಕೆಯಲ್ಲಿ ಈಗಷ್ಟೇ ಮಾತನಾಡಲು ಕಲಿಯುತ್ತಿರುವ ಎಳೆಮಗುವಿನಲ್ಲಿ ಸ್ಪೀಚ್ ಡಿಲೆ ಆಗುತ್ತದೆ. ಮಗುವಿನ ಮಾತನಾಡುವ ಶಕ್ತಿಯೇ ಇಲ್ಲವಾಗುತ್ತದೆ. ಮಗು ಮೊಬೈಲ್ ನೋಡಲು ಮುಂದಾಗುವುದರಿಂದ ಮನೆಯಲ್ಲಿ ಯಾರಾ ಮಾತುಗಳು ಸಹ ಮಗುವಿನ ಬುದ್ಧಿಶಕ್ತಿಗೆ ನಿಲುಕದಂತಾಗುತ್ತದೆ. ಹೀಗಾಗಿ ಮಗು ಮಾತನಾಡುವುದನ್ನು ಕಲಿಯಲು ಬಹಳ ಸಮಯ ತೆಗೆದುಕೊಳ್ಳುತ್ತದೆ.

ಹಾರ್ಮೋನಲ್ ಚೇಂಜಸ್:
ಬೆಳೆಯುವ ಮಕ್ಕಳಿಗೆ ಮೊಬೈಲ್ ನೀಡುವುದರಿಂದ ಅವರು ಖುಷಿಯಾಗಲು ಕಾರಣವಿದೆ. ಅಂದರೆ ಮೊಬೈಲ್‌ನಲ್ಲಿ ಅವರ ಇಷ್ಟದ ಕಾರ್ಟೂನ್ ನೋಡಿದರೆ ಅವರಲ್ಲಿ ಡೊಪಮೈನ್ ಬಿಡುಗಡೆಯಾಗುತ್ತೆ, ಇದು ಅವರ ಖುಷಿಗೆ ಕಾರಣವಾಗುತ್ತೆ. ಆದ್ರೆ ಮುಂದೆ ಕೈನಲ್ಲಿ ಈ ಮೊಬೈಲ್ ಇಲ್ಲದಿದ್ದರೆ ಡೊಪಮೈನ್ ಬಿಡುಗಡೆಯವುದೇ ಇಲ್ಲ. ಹೀಗಾದಾಗ ಮಕ್ಕಳು ಖುಷಿಯಾಗಿರಲು ಸಾಧ್ಯವಾಗುವುದಿಲ್ಲ. ಇದು ಓದಿಗೆ, ಆಟದಲ್ಲಿ ಸೇವಿ ವರ್ತನೆಯಲ್ಲೂ ಬದಲಾವಣೆ ಕಂಡುಬರುತ್ತದೆ.

ಕಣ್ಣಿನ ಸಮಸ್ಯೆ:
ಕೋವಿಡ್ ಬಳಿಕ ಮಕ್ಕಳ ಮೊಬೈಲ್ ಸ್ಕ್ರೀನಿಂಗ್ ಸಮಯವು ಹೆಚ್ಚಾಗಿದೆ. ಇದಕ್ಕೆ ಹಲವು ಕಾರಣಗಳಿವೆ. ಶಾಲೆಯಲ್ಲೂ ಆನ್‌ಲೈನ್ ಕ್ಲಾಸ್‌ಗಳು, ಮಕ್ಕಳ ವಾಟ್ಸಾಪ್ ಗ್ರೂಪ್‌ಗಳು ಮಾಡಿರುವುದು ಸಹ ಕಾರಣವಾಗಿದೆ. ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳಿಗೆ ಮಯೋಪಿಯಾ ಡಿಸೀಸ್ ಎಂಬ ಕಣ್ನಿನ ಸಮಸ್ಯೆಗೆ ಕಾರಣವಾಗಿದೆ. ಈ ಕಾಯಿಲೆಯಿಂದ ಶಾಶ್ವತ ದೃಷ್ಠಿದೋಷದಂತ ಸಮಸ್ಯೆಗೆ ಮಕ್ಕಳು ಒಳಗಾಗುತ್ತಾರೆ. ಇದು ಕೋವಿಡ್ ಬಳಿಕ ಹೆಚ್ಚಳವಾಗಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಇನ್ನು ಚಿಕ್ಕ ಮಕ್ಕಳಲ್ಲ ಕಾರ್ನಿಯಲ್ ಸಮಸ್ಯೆಗೆ ಇದು ಕಾರಣವಾಗುತ್ತಿದೆ. ಹೆಚ್ಚು ಬ್ಲೂ ರೇ ಕಿರಣಗಳು ಕಣ್ಣಿಗೆ ಬೀಳುವುದು ಚಿಕ್ಕ ವಯಸ್ಸಿನಲ್ಲಿ ಕನ್ನಡಕ ಬಳಸುವಂತೆ ಮಾಡುತ್ತಿದೆ.